ಕವಿತೆ ಬರೆಯಲಿ ಹೇಗೆ ಕವಿತಿದೆ ಮನದ ಬಾನಂಗಳದಲಿ ಕಾರ್ಮೋಡಗಳು,
ಇದ್ದವರ ಇಲ್ಲದಂತಾಗಿಸಿ, ಇರುವವರ ಇರಿದು ಇಡಿ ಇಡಿಯಾಗಿ ಹೊಸಕಿಯಿರಿಸಿದೆ..
ಲಯದ ಬದುಕಿಗೆ ಭಯವ ಬೆರೆಸಿ,
ನಮ್ಮವರ ಮನೆ ಮನದಿಂದ ದೂರ ಸರಿಸಿ..
ಕವಿಯುತಿಹುದು ಕಾರ್ಮೋಡಗಳು ಮನದಂಗಳದಿ, ಕವಿದಂತಿರುವ ಬಾನಂಗಳದಿ..
ಮದ್ದಿರುವುದು ಇದಕು ಅದಕು ಎಲ್ಲದಕು, ಹದ್ದಿರುವುದು ಸಕಲಕು..ಎಂದಿನಂತೆ ಕವಿದಿರೋ ಮೋಡ ಸರಿದು, ದಿನಕರನ ಆಗಮನ ಆಗಲೇಬೇಕು, ಭೂಮಿ ಬೆಳಗಲೇಬೇಕು..
ಎಂದಿನಂತೆ ಉಂಟಾಗಿರುವ ಸಾಂಕ್ರಾಮಿಕ ರೋಗ ಸರಿದು, ನಮ್ಮ ಶ್ರೇಷ್ಠ ಜೀವನಕ್ಕೆ ಉತ್ಸಾಹ ಇರಲೇಬೇಕು, ಉಜ್ವಲವಾಗಲೇಬೇಕು..
ಕೋರೋನ ನಂತರದ ಜೀವನ, ಜಗತ್ತು ಸವಾಲುಗಳ ಸರಮಾಲೆ ಎಂದು ತಿಳಿಯದೇ, ಅವಕಾಶಗಳ ಸಾಗರ ಏನ್ನೋ ಹುರುಪು, ಉತ್ಸಾಹ ತುಂಬುವ ಪ್ರಯತ್ನ ಈ podcast ನಲ್ಲಿ